Arjun Sarja's Different promotional strategy for 'Prema Baraha'. Prema Baraha is a bilingual movie made simultaneously both in Kannada and Tamil which is written and directed by Arjun Sarja. Bigg Boss fame Chandan playing the male lead role along with Arjun's daughter Aishwarya Arjun debuting to sandalwood as female lead through this movie.
'ಪ್ರೇಮ ಬರಹ'ಕ್ಕೆ ದರ್ಶನ್, ಅಂಬಿ ಬರಮಾಡಿಕೊಳ್ಳುವ ಆ ಸೆಲೆಬ್ರಿಟಿ ಯಾರು.?ಸ್ಯಾಂಡಲ್ ವುಡ್ ನ 'ಚಾಲೆಂಜಿಂಗ್ ಸ್ಟಾರ್' ಕನ್ನಡ ಸಿನಿಮಾ ಅಭಿಮಾನಿಗಳಿಗಾಗಿ ಅತಿಥಿಯೊಬ್ಬರನ್ನ ಕರೆ ತರ್ತಿದ್ದಾರೆ. ಇದೇ ತಿಂಗಳ 7ನೇ ತಾರೀಖಿನಂದು ದರ್ಶನ್ ಈ ಸರ್ಪೈಸ್ ಅನ್ನ ರಿವೀಲ್ ಮಾಡ್ತಾರಂತೆ. ಅಷ್ಟೇ ಅಲ್ಲ ಆ ಗೆಸ್ಟ್ ಅನ್ನ ರೆಬೆಲ್ ಸ್ಟಾರ್ ಅಂಬಿ ಕೂಡ ಬರಮಾಡಿಕೊಳ್ತಿದ್ದಾರೆ. ಅದಕ್ಕೆ ಈ ಇಬ್ಬರು ಸ್ಟಾರ್ ಗಳು ತಮ್ಮ ಅಭಿಮಾನಿಗಳಿಗೆ ನವೆಂಬರ್ 7ರ ವರೆಗೂ ಕಾಯಿರಿ ಅನ್ನೋ ಸಂದೇಶವನ್ನ ಸಾರಿದ್ದಾರೆ. ಅಷ್ಟಕ್ಕೂ ಈ ಬಿಗ್ ಸ್ಟಾರ್ ಗಳು ಇದೆಲ್ಲಾ ಮಾಡ್ತಿರೋದು ಅರ್ಜುನ್ ಸರ್ಜಾ ರಿಗಾಗಿ... ಸರ್ಜಾ ಫ್ಯಾಮಿಲಿಯಿಂದ ನಾಯಕಿ ಐಶ್ವರ್ಯ ಸರ್ಜಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಐಶ್ವರ್ಯ ಆಕ್ಟ್ ಮಾಡಿರುವ ಅರ್ಜುನ್ ಸರ್ಜಾ ನಿರ್ದೇಶನ ಮಾಡಿ ನಿರ್ಮಾಣ ಮಾಡುತ್ತಿರುವ 'ಪ್ರೇಮ ಬರಹ' ಸಿನಿಮಾದ ಬಗ್ಗೆ ನವೆಂಬರ್ 7 ರಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡ್ತೀನಿ ಎಂದಿದ್ದಾರೆ. ದರ್ಶನ್, ಅಂಬರೀಶ್ ಮಾತ್ರವಲ್ಲದೆ ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ಕೂಡ ಸ್ಪೆಷಲ್ ಗೆಸ್ಟ್ ಗಾಗಿ ಕಾದಿರಿ ಅಂತಿದ್ದಾರೆ. ಈ ಎಲ್ಲಾ ಸ್ಟಾರ್ ಗಳು ತಮ್ಮದೆ ಆದ ಸ್ಟೈಲ್ ನಲ್ಲಿ ವಿಡಿಯೋ ಮಾಡಿ ನವೆಂಬರ್ 7 ರ ವರೆಗೂ ಕಾಯಿರಿ ಎಂದಿದ್ದಾರೆ.